Shri Siddharoodha Swamiji Math Trust Committee

Hubballi

www.srisiddharoodhaswamiji.in

2024 ನೇ ವರ್ಷದ ಶಿವರಾತ್ರಿ ಮಹೋತ್ಸವಕ್ಕೆ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು, ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಹಾಗೂ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ. & ಶ್ರೀ ಮಠದ ಧರ್ಮದರ್ಶಿಗಳು ಭಕ್ತವೃಂದಕ್ಕೆ ಮಾಡುವ ವಿನಯಪೂರ್ವಕ ವಿಜ್ಞಾಪನೆಗಳು
Date : 01-03-2024
ಮಹಾಶಿವರಾತ್ರಿ ಮಹೋತ್ಸವವು ಇದೇ ಶೋಭಕೃತನಾಮ ಸಂವತ್ಸರ ಮಾಘ ವದ್ಯ ಸಪ್ತಮಿ ದಿನಾಂಕ: 03.03.2024 ರವಿವಾರದಂದು ಸೂರ್ಯೋದಯಕ್ಕೆ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಗುವುದು. ಪ್ರತಿನಿತ್ಯ ಬೆಳಿಗ್ಗೆ 07-45 ಘಂಟೆಗೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, ಮುಂಜಾನೆ 09-00 ಘಂಟೆಗೆ ಮಹಾತ್ಮರಿಂದ, ಪಂಡಿತರಿ0ದ ವೇದಾಂತ ಉಪನ್ಯಾಸಗಳು ನಡೆಯುವವು. ಸಾಯಂಕಾಲ 05-00 ಘಂಟೆಗೆ ಕೀರ್ತನೆ ನಡೆದು ಮಹಾಪೂಜೆ ನಡೆಯುವುದು. ದಿನಾಂಕ: 08.03.2024 ರ ಮಾಘ ವದ್ಯ ತ್ರಯೋದಶಿ ಶುಕ್ರವಾರ ಮಹಾಶಿವರಾತ್ರಿ ಜಾಗರಣೆ ನಿಮಿತ್ಯ ಪಲ್ಲಕ್ಕಿ ಉತ್ಸವವು ಗಣೇಶಪೇಟೆಯಲ್ಲಿರುವ ಶ್ರೀ ಜಡಿಸ್ವಾಮಿ ಮಠಕ್ಕೆ ಹೋಗಿ ಮರಳಿ ಶ್ರೀಮಠಕ್ಕೆ ಬರುವುದು. ದಿನಾಂಕ 09.03.2024 ನೇ ಶನಿವಾರ ಪಲ್ಲಕ್ಕಿ ಉತ್ಸವ ನಂತರ ಸಾಯ0ಕಾಲ 05-30 ಘಂಟೆಗೆ ರಥೋತ್ಸವ ಜರುಗುವುದು. ದಿನಾಂಕ 10.03.2024 ರ ರವಿಮವಾರ ಶಿವರಾತ್ರಿ ಅಮವಾಸ್ಯೆ ಬೆಳಿಗ್ಗೆ 05-00 ರಿಂದ ೦6:೦೦ ಘಂಟೆ ವರೆಗೆ ಭಸ್ಮ ಸ್ನಾನ ನೆರವೇರುವುದು. ದಿನಾಂಕ 11.03.2024 ನೇ ಸೋಮವಾರ ಸಾಯಂಕಾಲ 6 ಘಂಟೆಗೆ ಕೌದಿ ಪೂಜೆಯೊಂದಿಗೆ ಉತ್ಸವವು ಸಮಾಪ್ತವಾಗುವದು. ಕಾರಣ ಸದ್ಭಕ್ತರು ಸಹ ಕುಟುಂಬ ಪರಿವಾರದೊಡನೆ ಬಂದು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮತ್ತು ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಯವರ ದರ್ಶನ ಆಶೀರ್ವಾದ ಪಡೆದು ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು ಮನ ಧನ ದಿಂದ ಸೇವೆ ಸಲ್ಲಿಸಿ, ಸದ್ಗುರು ಶ್ರೀ ಸಿದ್ಧಾರೂಢರ ಮತ್ತು ಸದ್ಗುರು ಶ್ರೀ ಗುರುನಾಥಾರೂಢರ ಕೃಪೆಗೆ ಪಾತ್ರರಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕಾಗಿ ವಿನಂತಿ.